ನಮ್ಮ ಕಾಲೇಜಿನಳೊಗೊಂದು ಪುಟ್ಟ ಕ್ಯಾಂಟೀನು..
ಅಲ್ಲಿ ಎಂದಿಗೂ ಕಾಣಿಸುತ್ತಿದ್ದವರು ಇಬ್ಬರೇ...ಅವಳು-ಇವನು..
ಅವರ ಹೆಸರೇನು?? ಕೇಳಿದವರಿಗೇ ಗೊತ್ತು..
ಅವರ ಹೆಸರು ಎನಾದರೇನಂತೆ?? ನಿನಗ್ಯಾಕೆ.. ಎಂದು ಮನಸ್ಸು ಹೇಳಿತು..
ಅವರಿಬ್ಬರನ್ನು ನೀವು ಕ್ಯಾಂಟೀನಿನಲ್ಲೊಮ್ಮೆ ನೋಡಬೇಕು..
ಅವರಿಬ್ಬರು ನಸುನಗುತ್ತಾ ಮಾತನಾಡುವುದನ್ನು ಕೇಳಬೆಕು..
ಅವರು ಗೆಳೆಯರೋ, ಪ್ರೆಮಿಗಳೊ ತಿಳಿಯುವುದು ಹೇಗೆ...
ಸುಮ್ಮನಿದ್ದುಬಿಡಬೇಕು.. ಎಲ್ಲಾ ತಿಳಿದೂ ತಿಳಿಯದವರ ಹಾಗೆ..
ಪ್ರತಿ ದಿನ ಅವಳು ಕಾಲೇಜು ಬಸ್ಸಿನಲ್ಲಿ ಬರುತ್ತಿದ್ದಳು..
ಇವನಿಗೆ ಬೈಕ್ ನಲ್ಲಿ ಬಸ್ಸಿನ ಪಕ್ಕ ಅವಳನ್ನು ನೋಡುತ್ತಾ ಬರುವ ಹುಚ್ಚು..
ವರ್ಷವೊಂದು ಎರಡಾಯ್ತು...ಇವರ ಪ್ರೀತಿ ಚಿಗುರೊಡೆದ ಮರವಾಯ್ತು..
ಮೊದಲೆಲ್ಲಾ ಇವರನ್ನು ನೋಡಿ ಹೀಯಾಳಿಸಿದವರಿದ್ದಾರೆ..
"ಎಷ್ಟು ದಿನ ಹೀಗೇ?? ಎಲ್ಲಾ ಕಾಲೇಜಿನ ಪ್ರೇಮಿಗಳ ಹಾಗೆ"..
ಎಂದಿಗೂ ಕ್ಯಾಂಟೀನಿನಲ್ಲಿ ಕಾಣುವ ಇವರು ಯಾವಾಗ ಓದುತ್ತಾರೆ??..
ಇಬ್ಬರೂ RANK ಸ್ಟೂಡೆಂಟ್ ಗಳು ಸ್ವಾಮಿ...ಮತ್ತೆ ಮಾತನಾಡುವ ಖಯಾಲಿ ಯಾಕೆ??
ಇನ್ನೊಂದು ವರ್ಷದಲ್ಲಿ ಇವರ ಡಿಗ್ರೀ ಮುಗಿಯುವುದು...
ಮುಂದೆಯೂ ಇವರು ಹೀಗೆಯೇ ಇರುವರೇ?? ಕುತೂಹಲದ ಹಾದಿ...
ಅವತ್ತೊಂದು ದಿನ ಕ್ಯಾಂಟೀನಿಗೆ ಹೋದವನಿಗೆ ಅವರ ಸುಳಿವಿಲ್ಲ...
ಯಾಕಿರಬಹುದೆಂದು ಮಾತನಾಡುವವರಿಗೇನೂ ಕಮ್ಮಿಯಿಲ್ಲ...
ಒಂದು ವಾರವಾದರೂ ಅವರು ಕಾಣದಿದ್ದಾಗ ಸಂಶಯದ ದುಗುಡ..
ಅವರ ಸಹಪಾಠಿಗಲನ್ನೊಮ್ಮೆ ಕೇಳಿನೊಡಬೇಕು...
ಅವರು ಯಾರೋ ಗೊತ್ತೇ ಇಲ್ಲ ನನಗೆ..ಮತ್ಯಾಕೆ ಕೇಳಬೇಕು..
ಅರೆ..!! ಎರಡು ವರ್ಷಗಳಿoದ ಒಂದೇ ಕ್ಯಾಂಟೀನಿನಲ್ಲಿ ಟೀ ಕುಡಿಯುವವರಲ್ಲವೇ ನಾವು..??
ಮತ್ತೆಂತಹ ಪರಿಚಯ ಬೇಕು!!
ಮರುದಿನ ಮತ್ತದೇ ಕ್ಯಾಂಟೀನಿಗೆ ಕಾಲಿಟ್ಟಾಗ ನನ್ನ ಗೆಳೆಯ ಹೇಳಿದ..
ಆ ಹುಡುಗನಿಗೆ ಆಕ್ಸಿಡೆಂಟ್ ಆಯ್ತಂತೆ..ಒಂದು ಕಾಲು ಇಲ್ಲ ಈಗ..
ಛೆ..ಛೇ...ಎಂತಹ ಕೆಟ್ಟ ಸುದ್ದಿ...
ಅವನ ಒಂದು ಕಾಲೇ ಹೋಯಿತೆ...ದೇವರಿಗ್ಯಾಕೆ ಬಂತು ಇಂತಹ ಕೆಟ್ಟ ಬುದ್ದಿ!!
ಮುಂದೆ ಅವನು ಅವಳಿಗೆ ಸಿಕ್ಕಾಗ ಅವಳು ಅವನನ್ನು ನೋಡುವ ರೀತಿ ಹೇಗೆ??
ಪಕ್ಕದಲ್ಲಿದ್ದವರು ಹೇಳಿದರು "ಕಾಲಿಲ್ಲದವನ ಜೊತೆ ಬಾಳುವೆ ಮಾಡುವುದು ಹೇಗೆ ಎಂದುಕೊಂಡು ಸುಮ್ಮನಿದ್ದುಬಿಡಬಹುದು ಅವಳು..
ಅವನು ಗೊತ್ತೂ-ಗೊತ್ತಿಲ್ಲದ ಹಾಗೆ!!"
ಮರುದಿನ ನಾವೆಲ್ಲಾ ಕ್ಯಾಂಟೀನಿನಿಂದ ಹೊರಬಂದಾಗ ನಮ್ಮೊಳಗೊಂದು ಸಣ್ಣ ಮೌನ...
ಅವನು ಕುಂಟುತಾ ಬರುತ್ತಿದ್ದಾನೆ..ಅವಳು ಅವನಿಗೆ ಹೆಗಲಿತ್ತು ನೆಡೆಸುತ್ತಿದ್ದಾಳೆ...ಇದಲ್ಲವೇ ಪ್ರೀತಿಯ ಯಾನ..
ಅಂದು ಅವಳ ಮುಖವನ್ನೊಮ್ಮೆ ನೀವು ನೋಡಬೇಕಿತ್ತು...
ಮುಖದಲ್ಲಿ ಮಂದಹಾಸ..ಕಣ್ಣಲ್ಲಿ ನೀರ ಹನಿಯಿತ್ತು...
ನಮ್ಮ ಕಾಲೇಜಿನೊಳಗೊಂದು ಪುಟ್ಟ ಕ್ಯಾಂಟೀನು...
ಇಂದಿಗೂ ಅಲ್ಲಿ ಕಾಣಸಿಗುತ್ತಾರೆ..ಅವಳು-ಇವನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ